ಶುಕ್ರವಾರ ೩೦ ಅಕ್ಟೋಬರ್ ೨೦೦೯

ತುಳಸೀ ಪೂಜೆ

ಶ್ರೀ ತುಳಸೀ ಜಯ ತುಳಸೀ,

ಕಾಯೇ ನೀ ಅನವರತ, ಪರಿಪಾಲಿಸೇ


ನೀನಿರುವ ಅಂಗಳ,ಆ ಮನೆಗೆ ಮಂಗಳ

ಆನಂದದಿಂಗಳ ನಗೆಯ ಬೆಳದಿಂಗಳ

ನಿನ್ನಿಂದ ಇಹವು,ನಿನ್ನಿಂದ ಪರವು

ಸೌಭಾಗ್ಯವತಿಯರಿಗೆ ಪರಮ ಪಾವನವು


ನೀನಿಲ್ಲದ ಪೂಜೆಯು ಆ ಹರಿಗೆ ತ್ಯಾಜ್ಯವು

ನಿನ್ನ ಸ್ಪರ್ಶವಿಲ್ಲದೆ ನೈವೇದ್ಯವು ವ್ಯರ್ಥವು

ನೀನಿರುವ ತಾಣವೇ ಶ್ರೀ ಕೃಷ್ಣನ ವಾಸವು

ನಿನ್ನ ಆರಾಧನೆಯೇ ಜನ್ಮ ಪಾವನವು

5 ಕಾಮೆಂಟ್‌(ಗಳು):

ಚಂದ್ರಕಾಂತ ಎಸ್ ಹೇಳಿದರು...

ತುಳಸಿ ಹಬ್ಬದ ಶುಭಾಶಯಗಳು.

ಇಷ್ಟು ಸೊಗಸಾಗಿ ಕಲಾತ್ಮಕವಾಗಿ ತುಳಸಿಗೆ ಅಲಂಕಾರ ಮಾಡಿರುವುದನ್ನು ನೋಡುತ್ತಿರುವುದು ಇದೇ ಮೊದಲು.!!

shivu ಹೇಳಿದರು...

ಮೇಡಮ್,

ತುಳಸಿ ಆಲಂಕಾರ ತುಂಬಾ ಚೆನ್ನಾಗಿದೆ.

ತುಳಸಿ ಹಬ್ಬದ ಶುಭಾಶಯಗಳು.

ನನ್ನ ಬ್ಲಾಗಿನಲ್ಲಿ ನನ್ನ ಪುಸ್ತಕ ಬಿಡುಗಡೆಯ ವಿಚಾರವನ್ನು ಬರೆದಿದ್ದೇನೆ. ಬೇಟಿಕೊಡಿ.

ಸುಪ್ತದೀಪ್ತಿ ಹೇಳಿದರು...

ತುಳಸೀಪೂಜೆಗೆ ಇಷ್ಟು ಚಂದ ಅಲಂಕಾರ ಮಾಡೋದನ್ನ ನಾನೂ ಇಲ್ಲೇ ನೋಡ್ತಿರೋದು. ನಮ್ಮಲ್ಲೆಲ್ಲ ತುಳಸಿ ಗಿಡದ ಜೊತೆಗೆ ಕಟ್ಟೆಯಲ್ಲೇ ನೆಲ್ಲಿಕಾಯಿಯ ಒಂದು ಗೆಲ್ಲನ್ನೂ ಇಟ್ಟು ಜೊತೆಗೆ ಪೂಜೆ ಮಾಡ್ತಾರೆ.

ಮುತ್ತುಮಣಿ ಹೇಳಿದರು...

ತೊಳಸಮ್ಮನಿಗೆ ಉಡಿಸಿರುವ ಸೀರೆ ಬೊಂಬಾಟ್!

ತೇಜಸ್ವಿನಿ ಹೆಗಡೆ- ಹೇಳಿದರು...

ಭಾರ್ಗವಿ ಅವರೆ,

ಚಂದ್ರಕಾಂತ ಅವರು ಹೇಳಿದಂತೆ,

ತುಳಸಿಯಮ್ಮನನ್ನು ಈ ರೀತಿ ಅದ್ಭುತವಾಗಿ ಸಿಂಗರಿಸಿದ್ದು ನೋಡುತ್ತಿರುವುದು ಇದೇ ಮೊದಲು. ಒಂದು ತರಹದ ಆಪ್ತತೆ, ಮಾತೃತ್ವ, ಭಕ್ತಿ ಮೂಡುತ್ತದೆ ನೋಡುತ್ತಿದ್ದರೆ...